ಜಲವೆ ಅಂಗವಾದ ಮಾಹೇಶ್ವರನಲ್ಲಿ
ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಭಕ್ತನಪ್ಪ
ಅಂಗಪಂಚಕವು ಗರ್ಭೀಕೃತವಾಗಿ
ಆ ಮಾಹೇಶ್ವರಂಗೆ ಗುರುಲಿಂಗ ಸಂಬಂಧವಾಗಿ
ಆ ಗುರುಲಿಂಗದಲ್ಲಿಯೆ
ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಆಚಾರಲಿಂಗವೆನಿಸುವ ಲಿಂಗಪಂಚಕವು ಗರ್ಭೀಕೃತವಾಗಿ
ಗುರುಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧಲಿಂಗದಲ್ಲಿಯೆ
ಬೆರಸಿ ಬೇರಿಲ್ಲದಿರಬಲ್ಲರೆ ಮಾಹೇಶ್ವರನೆಂಬೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Jalave aṅgavāda māhēśvaranalli
prasādi prāṇaliṅgi śaraṇa aikya bhaktanappa
aṅgapan̄cakavu garbhīkr̥tavāgi
ā māhēśvaraṅge guruliṅga sambandhavāgi
ā guruliṅgadalliye
śivaliṅga jaṅgamaliṅga prasādaliṅga mahāliṅga
ācāraliṅgavenisuva liṅgapan̄cakavu garbhīkr̥tavāgi
guruliṅgave āśrayavāgi intī ṣaḍvidhaliṅgadalliye
berasi bērilladiraballare māhēśvaranembenayya,
mahāliṅgaguru śivasid'dhēśvara prabhuvē.