Index   ವಚನ - 268    Search  
 
ಕೈಯಲ್ಲಿ ಹಣ್ಣಿದ್ದಂತೆ ಮರನನೇರಿ, ಕೊಂಬ ಬಾಗಿಸಿ ಕಾಯ ಕೊಯಿವ ಅರೆಮರುಳನಂತೆ ಅನಾದಿಮೂಲದೊಡೆಯ ತನ್ನ ಕರಸ್ಥಲ ಮನಸ್ಥಲದಲ್ಲಿಪ್ಪುದ ತಾನರಿಯದೆ ಬೇರೆ ಲಿಂಗವುಂಟು, ಬೇರೆ ಕ್ಷೇತ್ರವುಂಟು ಎಂದು ಹಲವು ಲಿಂಗಕ್ಕೆ ಹರಿದು ಹಂಬಲಿಸುವ ಈ ಸೂಳೆಗೆ ಹುಟ್ಟಿದವರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪ್ರಸಾದವಿಲ್ಲ ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.