Index   ವಚನ - 269    Search  
 
ಇಷ್ಟಲಿಂಗವ ತೋರಿ ನಾವು ನಿಷ್ಠೆವಾನರು, ನಾವು ಲಿಂಗಾಂಗಿಗಳೆಂದು ಹೊಟ್ಟೆಯ ತುಂಬಿಕೊಳಬಹುದಲ್ಲದೆ ಸರ್ವಾಂಗವನೂ ಲಿಂಗನಿಷ್ಠೆಯಲ್ಲಿ ಘಟ್ಟಿಗೊಳಿಸಬಾರದು ಕಾಣಿರಣ್ಣಾ. ಹೊಟ್ಟೆಯಾರ್ಥವುಳ್ಳವಂಗೆ ನಿಷ್ಠೆಯೆಲ್ಲಿಯದೊ? ನಿಷ್ಠೆ ಹೀನರಿಗೆ ನೀವು ಕನಸಿನೊಳಗೂ ಇಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.