Index   ವಚನ - 279    Search  
 
ತನುವ ಮುಟ್ಟಿಹ ಮನ ಮನವ ಮುಟ್ಟಿದ ತನು ತನು ಮನವ ಮುಟ್ಟಿಹ ಸರ್ವಕರಣಂಗಳ ನೋಡಾ. ಕಾಯದ ಕರಣಂಗಳ ಮುಟ್ಟಿಹ ಜೀವನ ನೋಡಾ. ಕಾಯ ಜೀವ ಕರಣಂಗಳ ಶುದ್ಧ ಪರಮಾತ್ಮಲಿಂಗದಲ್ಲಿ ಮುಟ್ಟಿಸಬಲ್ಲರೆ ಅದೇ ಅರ್ಪಿತ, ಅದೇ ಪ್ರಸಾದ ನೋಡಾ. ಆ ಪ್ರಸಾದಿ ಎಂದೂ ಪ್ರಳಯ ವಿರಹಿತ ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.