ಕರ್ಕಸನ ಕಂಗಳೊಳಗೆ ರಾಕ್ಷಸರ ಪಡೆಯಿಪ್ಪುದ ಕಂಡೆನಯ್ಯ.
ರಾಕ್ಷಸರ ಪಡೆಯೊಳಗೆ ಮುಕ್ಕಣ್ಣನುದಯವಾಗಲು
ಕರ್ಕಸನ ಕಂಗಳು ಕೆಟ್ಟು
ರಾಕ್ಷಸರ ಪಡೆ ಮುರಿದೋಡಿತ್ತು ನೋಡಾ!
ಮುಕ್ಕಣ್ಣ ಶಿವನೊಲವ ನಾನೇನೆಂಬೆನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Karkasana kaṅgaḷoḷage rākṣasara paḍeyippuda kaṇḍenayya.
Rākṣasara paḍeyoḷage mukkaṇṇanudayavāgalu
karkasana kaṅgaḷu keṭṭu
rākṣasara paḍe muridōḍittu nōḍā!
Mukkaṇṇa śivanolava nānēnembenayya,
mahāliṅgaguru śivasid'dhēśvara prabhuvē.
ಸ್ಥಲ -
ಮಾಹೇಶ್ವರನ ಪ್ರಾಣಲಿಂಗಿ