Index   ವಚನ - 283    Search  
 
ಇಂದ್ರಿಯಂಗಳುಳ್ಳನ್ನಕ್ಕರ ಪ್ರಾಣಂಗೆ ಬಂಧನ ಮಾಬುದೆ ಭವದುಃಖಿಗಳಿರಾ? ಇಂದ್ರಿಯಂಗಳನೆಲ್ಲವ ಲಿಂಗಸಂಧಾನವ ಮಾಡಬಲ್ಲರೆ ಪ್ರಾಣನ ಬಂಧನ ಬಿಟ್ಟು ಓಡುವುದು ನೋಡಾ. ಪ್ರಾಣಲಿಂಗವಾಗಿಯಲ್ಲದೆ ಪ್ರಳಯವ ಗೆಲಬಾರದು. ಪ್ರಳಯ ಪ್ರಳಯದ ಹಳೆಯರಾಗಿಪ್ಪವರ ಪ್ರಾಣಲಿಂಗಸಂಬಂಧಿಗಳೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.