ನೇಮ ನೆಲಗತವಾಯಿತ್ತು.
ಸೀಮೆ ನಿಸ್ಸೀಮೆಯಾಯಿತ್ತು ನೋಡಾ.
ನೀರ ಕಿಚ್ಚು ನುಂಗಿ ಊರನಾವರಿಸಿತ್ತು ನೋಡಾ.
ಊರು ಬೆಂದು ಉಲುಹಳಿದುಳಿದು
ಸೀಮೆ ನಾಮವ ಮೀರಿ ತಾನು ಪರಾಪರನು ನೋಡಾ.
ತನ್ನಿಂದನ್ಯವಾಗಿ ಇನ್ನೇನೂ ಇಲ್ಲ.
ಅನ್ಯ ಅನನ್ಯವೆಂಬುದಳಿದುಳಿದು;
ಅದ್ವೈತ ಪರವಸ್ತುವಾದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Nēma nelagatavāyittu.
Sīme nis'sīmeyāyittu nōḍā.
Nīra kiccu nuṅgi ūranāvarisittu nōḍā.
Ūru bendu uluhaḷiduḷidu
sīme nāmava mīri tānu parāparanu nōḍā.
Tannindan'yavāgi innēnū illa.
An'ya anan'yavembudaḷiduḷidu;
advaita paravastuvādenu kāṇā,
mahāliṅgaguru śivasid'dhēśvara prabhuvē.