Index   ವಚನ - 300    Search  
 
ಸರ್ವಾಂಗವನು ಲಿಂಗನಿಷ್ಠೆಯಿಂದ ಘಟ್ಟಿಗೊಳಿಸಿ ಮನವ ಉನ್ಮನಿಯಾವಸ್ಥೆಯನೆಯ್ದಿಸಿ ಶತಪತ್ರದಲ್ಲಿ ಸೈತಿಟ್ಟು ಲಿಂಗಕ್ಕೆ ಅರ್ಪಿಸಿದ ನೈವೇದ್ಯವ ಲಿಂಗ ನೆನಹಿನಲ್ಲಿಯೆ ಸ್ವೀಕರಿಸುವುದು ಅಂಗಾರ್ಪಿತವ ವಿಸರ್ಜಿಸುವುದಯ್ಯ. ತಟ್ಟುವ ಮುಟ್ಟುವ ಸೋಂಕುವ ವರ್ಮವನರಿದು ಲಿಂಗಮುಖಕ್ಕೆ ನಿವೇದಿಸಿ ಲಿಂಗಪ್ರಸಾದವ ಸ್ವೀಕರಿಸುತಿರಬಲ್ಲರೆ ಪ್ರಸಾದಿಸ್ಥಲವಿದೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.