Index   ವಚನ - 309    Search  
 
ಮಾತಿನಲ್ಲಿ ಭವಿಯ ಬಿಟ್ಟರೇನೋ? ಕನಸಿನಲ್ಲಿ ಮನಸಿನಲ್ಲಿ ಆವರಿಸಿಪ್ಪ ಭವಿ ಭವಿಯೆಂಬ ಸಂದೇಹದ ಕೀಲಕಳೆದು ನಿಸ್ಸಂದೇಹ ನಿರ್ಲೇಪಕನಾಗಿರಬಲ್ಲರೆ ಶೀಲಸಂಪನ್ನರೆಂಬೆ. ಉಳಿದುದೆಲ್ಲ ಸೂತಕದ ಪಾತಕ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.