Index   ವಚನ - 315    Search  
 
ತೈಲ ಬತ್ತಿ ಜ್ಯೋತಿಯ ಮುಟ್ಟಿ ಜ್ಯೋತಿಯಪ್ಪುದು ನೋಡಾ. ಸದ್ಭಕ್ತಿ ಸ್ನೇಹ ಮೋಹದಿಂದ ಲಿಂಗಸ್ಫರುಶನವ ಮಾಡಿ, ಆ ಭಕ್ತನ ದೇಹ ಮನ ಕರಣಂಗಳೆಲ್ಲವು ಲಿಂಗವಾದವು ನೋಡಾ. ಲಿಂಗವ ಮುಟ್ಟಿನ ಮತ್ತೊಂದೇನುವ ಮುಟ್ಟದ ನಿರ್ಮೋಹಿಯ ಮಾಹೇಶ್ವರನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.