Index   ವಚನ - 320    Search  
 
ಅಂಗದ ಮೇಲೊಂದು ಲಿಂಗವ ಕಂಡೆ; ಲಿಂಗದ ಮೇಲೊಂದಂಗವ ಕಂಡೆನು ನೋಡಾ. ಅಂಗವೆಂದರೆ ಆತ್ಮನು; ಲಿಂಗವೆಂದರೆ ಪರಮನು. ಶಿವಜೀವರೊಂದಾದಲ್ಲಿ, ಪ್ರಾಣಾಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ[ವೆ]ಂಬ ದಶವಾಯುಗಳ ಗಮನಾಗಮನದ ವಿಷಯವ್ಯಾಪ್ತಿಯಡಗಿ ಆತ್ಮಲಿಂಗಸಂಬಂಧಿಯಾಗಿರ್ದೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.