Index   ವಚನ - 319    Search  
 
ಮನೋಮಧ್ಯದಲ್ಲಿ ಒಂದು ಶಶಿ ಸಂಧಾನದ ಕಳೆ ಸಂಧಿಸಿ ಅರುಣೋದಯವಾದಂತಿದೆ ಇದೇನಯ್ಯ? ಅದು ಎನ್ನ ಭಾಗ್ಯದಿಂದ ಮತಿಪ್ರಕಾಶನವಾಯಿತ್ತಯ್ಯ. ಆ ಪ್ರಸನ್ನ ಪ್ರಸಾದವನೊಳಕೊಂಡು, ಉತ್ತಮೋತ್ತಮವಾಗಿ ನಿಮಗೆ ಸಲುವಳಿಯಾದುದನು ಆರು ಬಲ್ಲರಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.