ಮಂಜರ ದೃಷ್ಟಿಯಲ್ಲಿ ತೋರುವ ಇಂದ್ರಿಯ ಭೋಗಂಗಳು
ಮಹೇಂದ್ರಜಾಲವಾಗಿಪ್ಪುವು.
ಇದು ಮನಸಿನ ವಿಕಾರವೆಂಬುದನೊಬ್ಬರು ತಿಳಿಯದೆ
ತಬ್ಬಿಬ್ಬುಗೊಳುತ್ತಿದಾರೆ ನೋಡಾ ತ್ರೈಜಗವೆಲ್ಲ.
ಮಂಜರ ದೃಷ್ಟಿಯಲ್ಲಿ ಚಂದ್ರಮನುದಯವಾಗಲು
ಇಂದ್ರಿಯ ಭೋಗಂಗಳ ಮಹೇಂದ್ರಜಾಲವೆಲ್ಲ
ಬೆಂದು ಹೋದವು ನೋಡಾ ಎನ್ನ ತಂದೆ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Man̄jara dr̥ṣṭiyalli tōruva indriya bhōgaṅgaḷu
mahēndrajālavāgippuvu.
Idu manasina vikāravembudanobbaru tiḷiyade
tabbibbugoḷuttidāre nōḍā traijagavella.
Man̄jara dr̥ṣṭiyalli candramanudayavāgalu
indriya bhōgaṅgaḷa mahēndrajālavella
bendu hōdavu nōḍā enna tande,
mahāliṅgaguru śivasid'dhēśvara prabhuvē.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ