Index   ವಚನ - 337    Search  
 
ಕೈಯಲ್ಲಿ ಕುರುಹು, ಬಾಯಲ್ಲಿ ಅರುಹ ನುಡಿವುತಿಪ್ಪ ಅಯ್ಯಗಳೆಲ್ಲ ಇರುಹಿನ ಮೂತ್ರದಲ್ಲಿ ಪ್ರಳಯವಾದರು ನೋಡಾ. ಬಳಿಕಿವರರುಹು ಬರುದೊರೆವೋಯಿತ್ತು. ಇವರ ಪ್ರಾಣಲಿಂಗಿ ಸಂಬಂಧಿಗಳೆಂತೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.