Index   ವಚನ - 348    Search  
 
ತುಂಟ ಬಂಟಂಗೆ ನಂಟರು ನಾಲ್ವರು ನೋಡಾ. ಬಂಟರು ಎಂಟುಮಂದಿಗಳಾಗಿಪ್ಪರಯ್ಯ. ನಂಟರು ನಾಲ್ವರ ಕೊಂದು ಬಂಟರು ಎಂಟ ಮಂದಿಯ ಬಿಟ್ಟಲ್ಲದೆ ತುಂಟತನ ಬಿಡದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.