ಕಾವಿಯ ಸೀರೆಯ ಒಡೆಯರು
ಬಾವಿಯ ಆಳವ ನೋಡಿಹೆನೆಂದು ಹೋದರೆ
ಬಾವಿಯ ಬಗದೇವಿ ನುಂಗಿದುದ ಕಂಡೆನಯ್ಯ.
ಬಾವಿಯ ಹೂಳಿ, ಬಗದೇವಿಯ ಕೊಂದು
ಕಾವಿಯ ಸೀರೆಯ ಹರಿದಲ್ಲದೆ ದೇವರ ಕಾಣಬಾರದು;
ಪ್ರಾಣಲಿಂಗ ಸಂಬಂಧಿಗಳೆಂಬರೆ ನಾಚದವರನೇನೆಂಬೆನಯ್ಯ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Kāviya sīreya oḍeyaru
bāviya āḷava nōḍ'̔ihenendu hōdare
bāviya bagadēvi nuṅgiduda kaṇḍenayya.
Bāviya hūḷi, bagadēviya kondu
kāviya sīreya haridallade dēvara kāṇabāradu;
prāṇaliṅga sambandhigaḷembare nācadavaranēnembenayya?
Mahāliṅgaguru śivasid'dhēśvara prabhuvē.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ