Index   ವಚನ - 349    Search  
 
ಕಾವಿಯ ಸೀರೆಯ ಒಡೆಯರು ಬಾವಿಯ ಆಳವ ನೋಡಿಹೆನೆಂದು ಹೋದರೆ ಬಾವಿಯ ಬಗದೇವಿ ನುಂಗಿದುದ ಕಂಡೆನಯ್ಯ. ಬಾವಿಯ ಹೂಳಿ, ಬಗದೇವಿಯ ಕೊಂದು ಕಾವಿಯ ಸೀರೆಯ ಹರಿದಲ್ಲದೆ ದೇವರ ಕಾಣಬಾರದು; ಪ್ರಾಣಲಿಂಗ ಸಂಬಂಧಿಗಳೆಂಬರೆ ನಾಚದವರನೇನೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.