Index   ವಚನ - 350    Search  
 
ಅರಿವಿನ ಕುರುಹನರಿಯದೆ ತನುವ ಕರಗಿಸಿ ಮನವ ಬಳಲಿಸಿದರೆ ಏನು ಪ್ರಯೋಜನವೋ? ಇಂದ್ರಿಯವ ನಿಗ್ರಹ ಮಾಡಿ ವಿಷಯಂಗಳ ಬಂಧಿಸಿ ಆತ್ಮಂಗೆ ಬಂಧನವ ಮಾಡಿದರೆ ಆತ್ಮದ್ರೋಹ ಕಾಣಿಭೋ. ಹೀಂಗೆ ಉದ್ದೇಶದಿಂದ ತನುವ ಒಣಗಿಸಿದರೆ ಹಸಿಯ ಮರನ ತರಿದು ಬಿಸಿಲಿಗೆ ಹಾಕಿದಂತೆ. ತನು ಒಣಗಿದರೇನಯ್ಯ? ಮನದ ಮಲಿನ ಹಿಂಗದು. ಮನದ ಮಲಿನ ಹಿಂಗದನ್ನಕ್ಕರ ಭವ ಹಿಂಗಿತ್ತೆಂಬ ಭಂಡರನೇನೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.