Index   ವಚನ - 351    Search  
 
ಐದುಬಣ್ಣದ ಊರಿಂಗೆ ಐದುಬಗೆಯ ಕೇರಿ ರಚಿಸುತ್ತಿದ್ದಾವೆ ನೋಡಾ. ಊರುಕೇರಿಯ ಮಧ್ಯದಲ್ಲಿ ಅಷ್ಟದಳಮಂಟಪವದೆ ನೋಡಾ. ಅಷ್ಟದಳಮಂಟಪದೊಳಗಾಡುವ ಹಂಸನ ನಿಲವ ನಟ್ಟ ನಡುಮಧ್ಯದಲ್ಲಿ ನಿಲಿಸಿ ನೆರೆಯಬಲ್ಲಾತನೆ ದಿಟ್ಟ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.