Index   ವಚನ - 355    Search  
 
ಆಗಮವ ಬಲ್ಲೆ ಆಗಮವ ಬಲ್ಲೆವೆಂದು ಆಗಮಜ್ಞರೆನಿಸಿಕೊಂಬರು ನೀವು ಕೇಳಿರೋ. ಆಗಮವೆಂದು ನುಡಿವ ವಾಗಿಂದ್ರಿಯವ ಬಲ್ಲಿರಲ್ಲದೆ, ಆಗಮಮೂರ್ತಿ ಹೇಗಿಹುದು ಬಲ್ಲರೆ[ನೀವು] ಹೇಳಿ. ಆಗಮಮೂರ್ತಿ ವಾಙ್ಮನಕ್ಕಗೋಚರವು. ವಾಙ್ಮನಕ್ಕಗೋಚರವಾದ ವಸ್ತುವ ಆಗಮದಿಂದ ಅಂತಿದೆ, ಇಂತಿದೆಯೆಂದು ಹೇಳುವ ಭ್ರಾಂತಿನ ಬಹುಭಾರಿಗಳನೇನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.