ಇಂದ್ರಿಯಂಗಳಿಗೊಂದೊಂದು ಮಾತ ಕಲಿತು
ಬಹಳವ ಬಲ್ಲೆವು, ಬ್ರಹ್ಮಜ್ಞಾನಿಗಳೆಂದು ನುಡಿದುಕೊಂಡು
ನಡೆಯಬಲ್ಲರಲ್ಲದೆ,
ಸಾವನರಿದಿಹೆನೆಂದರೆ ದೇವತಾದಿಗಳಿಗಳವಲ್ಲ ಕಾಣಿರಣ್ಣಾ.
ದೇವರಮೂರ್ತಿಯ ಭಾವದಲ್ಲಿ ಕಂಡಲ್ಲದೆ
ಭವ ದುಃಖ ಹಿಂಗವು ನೋಡಾ.
ಭವ ದುಃಖವ ಹಿಂಗಿಸದೆ ಶಿವಾನುಭವವೇಕೆ ಹೇಳಿರೇ?
ಹುಸಿಯನೇ ಹೊಸೆದು, ಪಸೆಯನೇ ಕೊಚ್ಚಿ
ಪಶುಪತಿಯ ಅನುಭಾವಿಗಳೆಂದು
ಪ್ರಳಯಕ್ಕೊಳಗಾಗಿ ಹೋದರು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Indriyaṅgaḷigondondu māta kalitu
bahaḷava ballevu, brahmajñānigaḷendu nuḍidukoṇḍu
naḍeyaballarallade,
sāvanaridihenendare dēvatādigaḷigaḷavalla kāṇiraṇṇā.
Dēvaramūrtiya bhāvadalli kaṇḍallade
bhava duḥkha hiṅgavu nōḍā.
Bhava duḥkhava hiṅgisade śivānubhavavēke hēḷirē?
Husiyanē hosedu, paseyanē kocci
paśupatiya anubhāvigaḷendu
praḷayakkoḷagāgi hōdaru nōḍā,
mahāliṅgaguru śivasid'dhēśvara prabhuvē.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ