Index   ವಚನ - 371    Search  
 
ಐದೂರ ಹೊಲದಲಿ ಕೆಟ್ಟ ಪಶುವನು ಆರೂರ ಹೊಕ್ಕು ಅರಿಸಿಹೆನೆಂದು ಹೋದರೆ ಮೂರೇ ಮನೆಯಲ್ಲಿ ಈರುಗಾರಾಗಲಾಗಿ ಅರಸಬಂದಯ್ಯಗಳು ಆಸತ್ತು ಹೋದರಲ್ಲ. ಅರಸುವ ಅರುಹೆ ತಾನೆಂದು ತಿಳಿಯಲು ಮೂಲಾಕ್ಷರವಾಗಿ ತೋರುವ ಮೂಲಾಕ್ಷರಾತ್ಮಕ ತಾನೆ ತಪ್ಪದೆಂಬೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.