Index   ವಚನ - 377    Search  
 
ನೂಲೆಳೆಯ ತೋರದ ಪಶುವಿಂಗೆ ಮೇರುವೆಯ ತೋರ ಕೆಚ್ಚಲು ನೋಡಾ ಅಯ್ಯ. ಅದಕ್ಕೆ ಕೋಡೆರಡಿಲ್ಲ ನೋಡಾ. ಅದು ಮೊಲೆಗೊಕ್ಕುಳಹಾಲ ಕರೆವುದು. ಕರೆವಾತಗೆ ಕೈಯಿಲ್ಲ; ಕುಡಿವಾತಗೆ ಬಾಯಿಲ್ಲ ನೋಡಾ. ಕೈಯಿಲ್ಲದೆ ಕರೆದು ಬಾಯಿಲ್ಲದೆ ಉಂಡು ತೃಪ್ತಿಯಿಲ್ಲದೆ ಪರಿಣಾಮಿಸಬಲ್ಲಾತನಲ್ಲದೆ ಶಿವಶರಣನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.