Index   ವಚನ - 387    Search  
 
ಆಲಿಯ ಕೊನೆಯಲ್ಲಿ ಬೆಳೆದ ಹಾಲೆ ಬಾಲೆಯರನೆ ಬಯಸುತ್ತಿಪ್ಪುದು ನೋಡಾ. ಆಲಿಯ ಕೊನೆಯ ಹಾಲೆಯ ಹರಿದು ಬಾಲೇಂದುಮೌಳಿ ತಾನಾದ ಲಿಂಗೈಕ್ಯವನೇನಹೇಳುವೆನಯ್ಯ? ನೇತ್ರಕ್ಕೆ ಪ್ರತ್ಯಕ್ಷ ಘನಮಹಿಮ ತಾನಾದ ನಿಲವ ಚೆನ್ನಬಸವಣ್ಣ ಬಲ್ಲ. ಚೆನ್ನಬಸವಣ್ಣನ ಪಾದಕ್ಕೆ ನಮೋ ನಮೋಯೆನುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.