ಒಂಟೆಯ ತಲೆಯಲ್ಲಿ ಎಂಟಾನೆ ಹುಟ್ಟಿದುದ ಕಂಡೆನಯ್ಯ.
ಅದಕ್ಕೆ ನೆಂಟರು ಅರೇಳೆಂಟು ಹತ್ತು ನೋಡಾ.
ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಲು
ಎಂಟಾನೆ ಸತ್ತವು; ನಂಟರು ಕೈಬಿಟ್ಟರು.
ಒಂಟೆಯ ತಲೆಯ ಮೆಟ್ಟಿ ನಿಂದು ಉರಿಯ ಪುರುಷನ ನೆರದು
ಕಂಟಕಂಗಳ ಗೆಲಿದು ಸಂಸಾರಸಾಗರವ ದಾಂಟಿದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Oṇṭeya taleyalli eṇṭāne huṭṭiduda kaṇḍenayya.
Adakke neṇṭaru arēḷeṇṭu hattu nōḍā.
Oṇṭeya taleyalli uriliṅga huṭṭalu
eṇṭāne sattavu; naṇṭaru kaibiṭṭaru.
Oṇṭeya taleya meṭṭi nindu uriya puruṣana neradu
kaṇṭakaṅgaḷa gelidu sansārasāgarava dāṇṭidenu kāṇā,
mahāliṅgaguru śivasid'dhēśvara prabhuvē.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ