Index   ವಚನ - 390    Search  
 
ಮೂರೊಂದುಗೂಡಿದ ಬಟ್ಟೆಯಲ್ಲಿ ಮಾರಿ ಮನೆಯ ಮಾಡಿಕೊಂಡಿಪ್ಪುದ ಕಂಡೆನಯ್ಯ. ಮಾರಿಯ ಮುಖದಲ್ಲಿ ಮರ್ಕಟ ಹುಟ್ಟಿ ಮಾರುತನ ಬೆರಸಿ ಈರೇಳು ಲೋಕವ ನುಂಗಿತ್ತು ನೋಡಾ. ಈರೇಳು ಲೋಕವ ನುಂಗಿದ ಕಪಿ ಮೇಲುಗಿರಿಯನೇರಿ ದಾರಿಗೊಂಡು ಬರುವರ ಏಡಿಸಿ ಕಾಡುತ್ತಿರ್ದುದು ನೋಡಾ. ಕೋಡಗನ ಮುಖವ ನೋಡಿಹೆನೆಂದು ಹೋದರೆ ಅದು ಕಾಲಸರ್ಪನಾಗಿ ನುಂಗಿ ಹೇಳಿಗೆಯೊಂದರೊಳಗಡಗಿತ್ತು ನೋಡಾ. ಹೇಳಿಗೆ ಮುರಿಯಿತ್ತು; ಕಾಲಸರ್ಪ ಸತ್ತಿತ್ತು. ಮೇಲುಗಿರಿಯೆನೇರಿದ ಮರ್ಕಟ ನಾರಿಯ ಶಿರವ ಮೆಟ್ಟಿ ಮಾರಾರಿಯ ಬೆರಸಿದ್ದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.