Index   ವಚನ - 389    Search  
 
ಒಂಟೆಯ ತಲೆಯಲ್ಲಿ ಎಂಟಾನೆ ಹುಟ್ಟಿದುದ ಕಂಡೆನಯ್ಯ. ಅದಕ್ಕೆ ನೆಂಟರು ಅರೇಳೆಂಟು ಹತ್ತು ನೋಡಾ. ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಲು ಎಂಟಾನೆ ಸತ್ತವು; ನಂಟರು ಕೈಬಿಟ್ಟರು. ಒಂಟೆಯ ತಲೆಯ ಮೆಟ್ಟಿ ನಿಂದು ಉರಿಯ ಪುರುಷನ ನೆರದು ಕಂಟಕಂಗಳ ಗೆಲಿದು ಸಂಸಾರಸಾಗರವ ದಾಂಟಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.