ಇಬ್ಬರಿಗೊಬ್ಬ ಮಗ ಹುಟ್ಟಿ
ಅವನೊಬ್ಬನಿಗೈವರು ಹೆಂಡಿರು ನೋಡಾ.
ಸವತಿ ಮಚ್ಚರವ ಬಿಟ್ಟು ತಮ್ಮ ತಮ್ಮ ಭಾವದಲ್ಲಿ ನೆರೆವರು ನೋಡಾ.
ಐಯ್ವರ ಕೂಟದಲ್ಲಿ ಮೈಮರೆದಿದ್ದುದ ಕಂಡು
ಮೇಲೊಬ್ಬ ಸತಿ ಬಂದು ನೆರೆಯಲು
ಐವರ ಮನವಾರ್ತೆ ಕೆಟ್ಟು ಆಕೆಯ ಸಂಗದಿಂದ ಸೈವೆರಗಾಗಿ
ಸರ್ವ ನಿರ್ವಾಣಿಯಾದೆನು ನೋಡಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.