Index   ವಚನ - 394    Search  
 
ಕರಿಯ ಕರದಲ್ಲಿ ಅರಿಯಾರು ಹುಟ್ಟಿ ಸಿರಿದೇವಿಯ ಸೇವಿಸಿ ಮತಿವಂತರ ಮರುಳು ಮಾಡಿ ಗತಿ ಸತ್ಪಥಕೆ ವೈರಿಗಳಾದವು ನೋಡಾ. ಕರಿಯ ಕರವ ಮುರಿದು ಹರಿಯ ಮುಖದಲ್ಲಿ ಹಾಲು ಕುಡಿಯಬಲ್ಲರೆ ಸಿರಿದೇವಿ ಮಡಿದಳು. ಅರಿಗಳಾರು ನಮಗಾಧಾರವಿಲ್ಲೆನುತ ತೆಗೆದೋಡಿದುದ ಕಂಡೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.