Index   ವಚನ - 395    Search  
 
ರಂಜನೆಯ ಕೊಡದಲ್ಲಿ ಮಂಜಿನುದಕವ ತುಂಬಿ ಮಾನಿನಿ ಹೊತ್ತು ಮೂರು ಲೋಕದಲ್ಲಿ ರಂಜಿಸುತ್ತಿದ್ದಾಳೆ ನೋಡಾ. ಮಾನಿನಿಯ ರಂಜನೆಯ ಕಂಡು ನಾನು, ಹಿರಿಯರೆಂಬವರೆಲ್ಲ ಮಾನಿನಿಯ ಮಸಕದ ವಿಷಯಕೊಳಗಾದುದ ಇನ್ನೇನ ಹೇಳುವೆನಯ್ಯ. ರಂಜನೆಯ ಕೊಡವೊಡೆದು ಮಂಜಿನುದಕವರತು ಮಾನಿನಿಯ ರಂಜನೆಯ ಮಸಕದ ವಿಷಯವಡಗಿದರೆ ಪರಮ ನಿರಂಜನನೆಂದು ಬೇರುಂಟೇ ತಾನಲ್ಲದೇ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.