Index   ವಚನ - 397    Search  
 
ಬಹು ಜನಂಗಳು ಹೇತ ಹೇಲ ಹಂದಿ ತಿಂದು ತನ್ನ ಒಡಲ ಹೊರೆವುದಯ್ಯ. ತಾ ಹೇತ ಹೇಲ ಮರಳಿ ಮುಟ್ಟದು ನೋಡಾ. ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಮರಳಿ ಆ ಭವಿಯ, ನಂಟರು ಹೆತ್ತವರು ಬಂಧುಗಳೆಂದು ಬೆರಸಿದರೆ ಆ ಹಂದಿಗಿಂತಲೂ ಕರಕಷ್ಟ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.