Index   ವಚನ - 405    Search  
 
ಜ್ಯೋತಿಯ ತಮವೆಡೆಗೊಡಂತೆ ಚಂದ್ರಮನ ರಾಹು ಎಡೆಗೊಂಡಂತೆ ನಿಧಾನವ ಸರ್ಪನೆಡೆಗೊಂಡಂತೆ ಅಂಬುಧಿಯ ಅನಲನೆಡೆಗೊಂಡಂತೆ ಮನವ ಮಾಯನೆಡೆಗೊಂಡು ನಿಮ್ಮ ನೆನಹ ನೆಲೆಗೊಳಲೀಯದೆ ಮರಣಕ್ಕೊಳಗು ಮಾಡುತ್ತಿಪ್ಪುದಯ್ಯ. ಈ ತಮವ ಪರಿಹರಿಸಿ ಎನ್ನನುಳುಹಿಕೊಳ್ಳಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.