Index   ವಚನ - 409    Search  
 
ಭಕ್ತನಂಗವಾವುದು, ಮಾಹೇಶ್ವರನಂಗವಾವುದು, ಪ್ರಸಾದಿಯಂಗವಾವುದು, ಪ್ರಾಣಲಿಂಗಿಯಂಗವಾವುದು, ಶರಣನಂಗವಾವುದು, ಐಕ್ಯನಂಗವಾವುದು ಎಂದರೆ, ಈ ಅಂಗಸ್ಥಲಗಳ ಭೇದವ ಹೇಳಿಹೆನಯ್ಯ; ಭಕ್ತಂಗೆ ಪೃಥ್ವಿಯಂಗ. ಮಾಹೇಶ್ವರಂಗೆ ಜಲವೆ ಅಂಗ. ಪ್ರಸಾದಿಗೆ ಅಗ್ನಿಯೆ ಅಂಗ. ಪ್ರಾಣಲಿಂಗಿಗೆ ವಾಯುವೆ ಅಂಗ. ಶರಣಂಗೆ ಆಕಾಶವೆ ಅಂಗ. ಐಕ್ಯಂಗೆ ಆತ್ಮನೆ ಅಂಗ ಇಂತೀ ಅಂಗಸ್ಥಲಂಗಳ ಭೇದವ ತಿಳಿಯುವುದಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.