Index   ವಚನ - 416    Search  
 
ಭೂಮಿಯ ಮೇಲೆ ಹುಟ್ಟಿದ ಕಲ್ಲ ತಂದು ಭೂತದೇಹಿಗಳ ಕೈಯಲ್ಲಿ ಕೊಟ್ಟು ಕೊಟ್ಟ ಕೂಲಿಯ ತಕ್ಕೊಂಡು, ಹೊಟ್ಟೆಯ ಹೊರೆವ ಭ್ರಷ್ಟರಿಗೆ ಪ್ರಸಾದವೆಲ್ಲಿಯದೋ? `ನಾದಂ ಲಿಂಗಮಿತಿ ಜ್ಞೇಯಂ| ಬಿಂದು ಪೀಠಮುದಾಹೃತಂ|| ನಾದ ಬಿಂದುಯುತಂ ರೂಪಂ| ಲಿಂಗಾಕಾರಮಿಹೋಚ್ಯತೇ||' ಎಂದುದಾಗಿ ಇಷ್ಟಲಿಂಗದಾದಿಯನಿವರೆತ್ತ ಬಲ್ಲರು? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.