Index   ವಚನ - 417    Search  
 
ಪ್ರಸಾದ ಪದಾರ್ಥ ಉಚ್ಛಿಷ್ಟವೆನುತಿಪ್ಪಿರಿ? ಪ್ರಸಾದವಾವುದು ಪದಾರ್ಥವಾವುದು ಉಚ್ಛಿಷ್ಟವಾವುದು ಹೇಳಾ ಮರುಳೆ? ಪ್ರಸಾದವೆಂದರೆ ಪರಂಜ್ಯೋತಿಸ್ವರೂಪವಪ್ಪ ಶಿವತತ್ವವು; ಪದಾರ್ಥವೆಂದರೆ ಆತ್ಮನು; ಉಚ್ಛಿಷ್ಟವೆಂದರೆ ಮಾಯೆ ನೋಡಾ; ಮಾಯಾಕಾರ್ಯವಾದುದೇ ದೇಹ. ದೇಹೇಂದ್ರಿಯ ಮನಃ ಪ್ರಾಣಾದಿಗಳಪ್ಪ ಚತುರ್ವಿಂಶತಿ ತತ್ವಂಗಳು ಆ ಚತುರ್ವಿಂಶತಿ ತತ್ವಂಗಳಿಗೆ ಆಶ್ರಯವಾಗಿ ಚೈತನ್ಯವಾಗಿ ಆತ್ಮನು; ಅಂತು ಆತ್ಮ ಸಹವಾಗಿ ಪಂಚವಿಂಶತಿ ತತ್ವಂಗಳು. ಇಂತು ದೇಹೇಂದ್ರಿಯಾದಿಗಳ ಕಳೆದು ಆತ್ಮನ ಪರಮಾತ್ಮನಲ್ಲಿ ಸಮರ್ಪಿಸಬಲ್ಲರೆ ಪರಮ ಪ್ರಸಾದಿಯೆಂಬೆನು. ಪರಂಜ್ಯೋತಿ ಪ್ರಕಾಶನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.