Index   ವಚನ - 431    Search  
 
ಏಳುಪೀಠದೊಳಗೆ ಸಾವಿರದೈವತ್ತೆರಡು ಮನೆ ಮಾಡಿಪ್ಪುದ ಕಂಡೆನಯ್ಯ. ಒಂದೇ ಜ್ಯೋತಿ ಸಾವಿರದೈವತ್ತೆರಡು ಜ್ಯೋತಿಯ ಬೆಳಗುತ್ತಿದೆ ನೋಡಯ್ಯ. ಏಳುಪೀಠದೊಳಗೆ ಏಕಾಕಾರ ಅಖಂಡಪರಿಪೂರ್ಣವಾಗಿಪ್ಪುದಯ್ಯ. ಆ ಪರಿಪೂರ್ಣ ಪರಾಪರವೇ ತಾನೆಂದರಿದು ಸಮರಸವನೆಯ್ದ ಬಲ್ಲಾತನಲ್ಲದೆ ಶಿವೈಕ್ಯನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.