Index   ವಚನ - 453    Search  
 
ನಿರಾಕಾರ ಪರವಸ್ತು ತಾನೆ ತನ್ನ ವಿನೋದಾರ್ಥಕಾರಣ ನಿಜಜ್ಞಾನವಾಗಿ ತೋರಿತ್ತು ನೋಡಾ. ಆ ಮಹಾಜ್ಞಾನ ಚಿತ್ತೇ ಅಂಗಸ್ಥಲ ಲಿಂಗಸ್ಥಲವೆಂದಾಯಿತ್ತು ನೋಡಾ. ಅಂಗವೇ ಶರಣ; ಲಿಂಗವೇ ಶಿವ. ಅಂಗಲಿಂಗದ ಸಂಗಸಮರಸ ತಾನೆಂಬಾತ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.