Index   ವಚನ - 461    Search  
 
ಜಂಗಮವೇನು ಕಾಮಿಯೇ? ಕ್ರೋಧಿಯೇ? ಲೋಭಿಯೇ? ಅಲ್ಲ ಕಾಣಿರಣ್ಣ. ಮೋಹಿಯೇ? ಮದಡನೇ? ಮತ್ಸರನೇ? ಅಲ್ಲ ಕಾಣಿರಣ್ಣಾ. ಅಹಂಕಾರಿಯೇ ಮಮಕಾರಿಯೇ ಪ್ರಪಂಚಿಯೇ? ಇಂತೀ ಪ್ರಕೃತಿರೂಪನಲ್ಲ ಕಾಣಿರಣ್ಣಾ. . ನಿಃಕಾಮಿ, ನಿಃಕ್ರೋಧಿ, ನಿರ್ಲೋಭಿ, ನಿರ್ಮೋಹಿ, ನಿರ್ಮದ, ನಿರ್ಮತ್ಸರನಯ್ಯ. ನಿರಹಂಕಾರಿ, ನಿರ್ಮಮಕಾರಿ, ನಿಃಪ್ರಪಂಚಿ, ನಿರ್ಲೇಪಕನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿಭೋ.