Index   ವಚನ - 462    Search  
 
ಜಂಗಮವೇನು ಸಂಗಿಯೇ? ಭೂಭಾರಿಯೇ? ಸೀಮನೇ? ಉಪಾಧಿಕನೇ? ದೇಹಿಯೇ? ಮಲಿನನೇ? ಅನಿತ್ಯನೇ? ಅಲ್ಲ ಕಾಣಿರಯ್ಯ. ನಿಸ್ಸಂಗಿ; ನಿರಾಭಾರಿ; ನಿಸ್ಸೀಮ; ನಿರುಪಾಧಿಕ; ನಿರ್ದೇಹಿಯಯ್ಯ. ನಿರ್ಮಲ; ನಿತ್ಯ; ನಿರುಪಮ; ನಿರ್ಗುಣ; ನಿರಾಧಾರ; ನಿರಾಲಂಬ; ಸರ್ವಾಧಾರ ಸದಾ ಆನಂದಿಯೆ ಜಂಗಮದೇವನಯ್ಯ. ಆ ಜಂಗಮದೇವ ತಾನಾಗದೆ ಜಂಗಮ ಜಂಗಮವೆಂದು ನುಡಿದುಕೊಂಡು ನಡೆದರೆ ನಾಚದವರನೇನೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.