Index   ವಚನ - 468    Search  
 
ಹೊರಗೆ ವೇಷದ ಸೊಂಪು ಒಳಗೆ ರೋಷದ ಮೊಟ್ಟೆಯಯ್ಯ.E471 ಆಶನವನಿಕ್ಕಿ ಹಣವ ಕೊಡದವರ ಕಂಡರೆ ಶಾಪಿಸಿ ಕೋಪಿಸಿ ಪಾಪಿಗಳೆಂಬಿರಯ್ಯ. ನಿಮ್ಮ ಕಿಚ್ಚಿಗೆ ಸಾಪಿಸಿ ಕೋಪಿಸಿ ಹೊಯಿದು ಕುತಾಪಿಸುವವರು ನೀವು ಪಾಪಿಗಳಲ್ಲದೆ, ಅವರು ಪಾಪಿಗಳೇ ತಿಳಿದು ನೋಡಿರಯ್ಯ. ಜಗದ ಕರ್ತನ ವೇಷಧರಿಸಿ ಕರ್ತೃ ನೀವಾದ ಬಳಿಕ ಮಾನವರು ಕೊಟ್ಟಾರು ಕೊಂಡಾರು ಎಂಬ ಭ್ರಾಂತಿಯೇಕೆ? ಅರೆಮರುಳುಗಳಿರಾ, ಕೊಡುವಾತ ಶಿವನೆಂದರಿಯದ ಉದರ ಘಾತಕ ಖುಲ್ಲರನೊಲ್ಲ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭವೇ.