Index   ವಚನ - 482    Search  
 
ಕಟ್ಟರಸಿಲ್ಲದ ರಾಜ್ಯ[ಕ್ಕೆ] ಕಳ್ಳರ ಭಯ, ಒಕ್ಕಲಿಲ್ಲದ ಊರು ಹಾಳು, ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ ಲೋಕದ ದೃಷ್ಟಾಂತದಂತೆ ಮುಕ್ಕಣ್ಣನರುಹಿ[ಲ್ಲ]ದವನ ಹೃದಯ ಕರ್ಕಸದ ವೀಧಿ, ರಕ್ಕಸರ ಹೊಳಲು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.