ಅಂಗದ ಕಂಗಳ ಕಳೆಯೊಳಗೊಂಡು ಲಿಂಗವ ಕಂಡೆ,
ಅದು ಕಾಮಾರಿ ನೋಡಾ.
ಆ ಲಿಂಗ ಸಂಗದಿಂದ ಅನಂಗ ಸಂಗವ ಕೊಡಹಿ
ಅವಿರಳ ಪರಬ್ರಹ್ಮನಾಗಿ ಅರಿಷಡುವರ್ಗಂಗಳ ಗರ್ವವ
ಮುರಿದನು ನೋಡಾ ಶರಣನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Aṅgada kaṅgaḷa kaḷeyoḷagoṇḍu liṅgava kaṇḍe,
adu kāmāri nōḍā.
Ā liṅga saṅgadinda anaṅga saṅgava koḍahi
aviraḷa parabrahmanāgi ariṣaḍuvargaṅgaḷa garvava
muridanu nōḍā śaraṇanu,
mahāliṅgaguru śivasid'dhēśvara prabhuvē.