Index   ವಚನ - 487    Search  
 
ಶರೀರವಿಲ್ಲದಂಗನೆಗೆ ಐವರು ಸ್ತ್ರೀಯರು ಹುಟ್ಟಿದರು ನೋಡಾ. ಐವರು ಸ್ತ್ರೀಯರ ವಿಲಾಸದಿಂದ ಅನೇಕ ಕೋಟಿ ಬ್ರಹ್ಮಾಂಡಗಳ ತೋರಿಕೆ ನೋಡಾ. ಪಿಂಡಾಂಡಕ್ಕೆ ತಾವೆ ಅಧಿಷ್ಠಾನ ಕರ್ತೃಗಳಾಗಿಪ್ಪವು ನೋಡಾ. ಸ್ತ್ರೀಯರೈವರ ಅವರವರ ಭಾವಕ್ಕೆ ನೆರೆದು ಪರಮನೊಬ್ಬನೇ ಪಂಚಪುರುಷನಾಗಿಪ್ಪನು ನೋಡಾ. ಸ್ತ್ರೀಪುರುಷರನೊಳಕೊಂಡು ಅತಿಶಯವಾದ ಅವಿರಳಪರಬ್ರಹ್ಮವೇ ತಾನಾದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.