Index   ವಚನ - 505    Search  
 
ಅಂತರಂಗದಲ್ಲಿ ಅರುಹು ಪೂರ್ಣವಾಗಿ ಬಹಿರಂಗದಲ್ಲಿ ಸತ್ಕ್ರಿಯಾಸಂಪನ್ನನಾದ ಸುಚರಿತ್ರನು ನೋಡಾ ಭಕ್ತನು. ತನು ಮನ ಭಾವದಲ್ಲಿ ಇಷ್ಟ ಪ್ರಾಣ ಭಾವವ ನಿಲಿಸಿ ತನು ಮನ ಭಾವ ವಿರಹಿತನಾಗಿ ನಿರ್ದೇಹಿ ನೋಡಾ ಭಕ್ತನು. ಕ್ರಿಯೆ ಜ್ಞಾನ ಭಾವಲಿಂಗವ ಮುಟ್ಟಿ ಹಿಮ್ಮೆಟ್ಟದ ನಿಭ್ರಾಂತನಯ್ಯಾ ನಿಮ್ಮ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.