Index   ವಚನ - 508    Search  
 
ಕಾಯಕ್ಕಾಧಾರ ಭಕ್ತ. ಜೀವಕ್ಕಾಧಾರ ಭಕ್ತ. ಕರಣಕ್ಕಾಧಾರ ಭಕ್ತ. ಲಿಂಗಕ್ಕಾಧಾರ ಭಕ್ತ. ಜಂಗಮಕ್ಕಾಧಾರ ಭಕ್ತ. ಪ್ರಸಾದಕ್ಕಾಧಾರ ಭಕ್ತ. ಶಕ್ತಿಗಾಧಾರ ಭಕ್ತ. ಭಕ್ತಿಗಾಧಾರ ಭಕ್ತ. ಎನಗಾಧಾರ ಭಕ್ತ. ನಿನಗಾಧಾರ ಭಕ್ತ. ನಾನು ನೀನೆನ್ನದೆ ನಿರವಯ ನಿರ್ಮಾಯನಯ್ಯ ಭಕ್ತನು. ಇಂತಪ್ಪ ಭಕ್ತ ಸಂಗನಬಸವಣ್ಣನ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.