Index   ವಚನ - 510    Search  
 
ಮಾತೆಯಿಲ್ಲದ ಅಜಾತನು, ತಂದೆಯಿಲ್ಲದ ಇಂದುಧರನು, ತಂದೆ ತಾಯಿ ಹೆಸರು ಕುಲವಿಲ್ಲದ ಪರಮನು. ಲಿಂಗದಲ್ಲಿ ಉದಯನಾದ ಚಿನುಮಯನು ನೋಡಾ, ಭಕ್ತನು. ನಿರ್ವಿಕಲ್ಪ ನಿರಂಜನನಾಗಿ ಮಾಯಾರಂಜನೆಯಿಲ್ಲದ ಮಹಾಮಹಿಮನು ನೋಡಾ, ಭಕ್ತನು. ಒಳಹೊರಗನರಿಯದ ಪರಿಪೂರ್ಣಸರ್ವಮಯವಾದ ಜಗಭರಿತನು, ಅದ್ವಯನು ನೋಡಾ ಭಕ್ತನು. ಇಂತಪ್ಪ ನಿರುಪಾಧಿಕ ಭಕ್ತನ, ನಿರ್ಗುಣ ಚರಿತ್ರವನೇನೆಂಬೆನಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.