Index   ವಚನ - 517    Search  
 
ಆದಿಯಾಧಾರವ ಮುಟ್ಟದ ನಾದ ಬಿಂದು ಕಳಾತೀತನ ಕಂಡೆನು, ಅದು ಆದಿ ಮಹಾಘನಲಿಂಗ ನೋಡಾ. ಅದು ಎನ್ನಂಗ, ಪ್ರಾಣದಲ್ಲಿ ನಿಂದು ಲಿಂಗ ಜಂಗಮವಾಯಿತ್ತು ನೋಡಾ. ಲಿಂಗವೆ ಅಂಗವಾಗಿ, ಜಂಗಮವೆ ಪ್ರಾಣವಾಗಿ ಪರಶಿವಕಳೆಯೆ ಕಾರಣವಾಗಿಪ್ಪ ಲಿಂಗಾಂಗಿಯ ಮಾಹೇಶ್ವರನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.