Index   ವಚನ - 527    Search  
 
ಲೋಕದ ನಚ್ಚು ಮಚ್ಚೆಂಬ ಕಿಚ್ಚೆದ್ದು ಸುಡುತಿದೆ ನೋಡಾ. ನಿಶ್ಚಿಂತ ನಿರಾಳವೆಂಬ ನೀರನೆರೆಯಲು, ಆ ಕಿಚ್ಚು ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.