Index   ವಚನ - 528    Search  
 
ಒಸಿ ಲೋಕಾಧೀನ, ಒಸಿ ಶಿವಾಧೀನವುಂಟೆ ಲೋಕದೊಳಗೆ? ಒಸಿ ಪುರುಷ ಪ್ರಯತ್ನ, ಒಸಿ ಶಿವಪ್ರಯತ್ನವುಂಟೆ ಲೋಕದೊಳಗೆ? ಒಸಿ ಲೋಕಾರ್ಥ, ಒಸಿ ಪರಮಾರ್ಥವುಂಟೆ ಲೋಕದೊಳಗೆ? ಒಸಿ ಜೀವಗುಣ, ಒಸಿ ಪರಮನಗುಣವಂಟೆ ಲೋಕದೊಳಗೆ? ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ ಅಧಿಷ್ಠಾನ ಕರ್ತೃ ಶಿವನೆಂದರಿಯದವಂಗೆ ಶಿವಜ್ಞಾನವೆಲ್ಲಿಯದೋ? ಸಮಸ್ತಾತ್ಮರಿಗೆ ಸರ್ವಪ್ರೇರಕ ಸರ್ವಚೈತನ್ಯ ಸರ್ವವ್ಯಾಪಕ ಸರ್ವಮಯನು ಸರ್ವಜ್ಞನೊಬ್ಬನೆ ಸರ್ವಕಾರಣ. ಹೀಗೆಂಬುದು ಪರಮಾರ್ಥವಲ್ಲದೆ ಉಳಿದವೆಲ್ಲಾ ಜೀವಭಾವ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.