ಒಸಿ ಲೋಕಾಧೀನ, ಒಸಿ ಶಿವಾಧೀನವುಂಟೆ ಲೋಕದೊಳಗೆ?
ಒಸಿ ಪುರುಷ ಪ್ರಯತ್ನ, ಒಸಿ ಶಿವಪ್ರಯತ್ನವುಂಟೆ ಲೋಕದೊಳಗೆ?
ಒಸಿ ಲೋಕಾರ್ಥ, ಒಸಿ ಪರಮಾರ್ಥವುಂಟೆ ಲೋಕದೊಳಗೆ?
ಒಸಿ ಜೀವಗುಣ, ಒಸಿ ಪರಮನಗುಣವಂಟೆ ಲೋಕದೊಳಗೆ?
ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ
ಅಧಿಷ್ಠಾನ ಕರ್ತೃ ಶಿವನೆಂದರಿಯದವಂಗೆ ಶಿವಜ್ಞಾನವೆಲ್ಲಿಯದೋ?
ಸಮಸ್ತಾತ್ಮರಿಗೆ ಸರ್ವಪ್ರೇರಕ ಸರ್ವಚೈತನ್ಯ ಸರ್ವವ್ಯಾಪಕ
ಸರ್ವಮಯನು ಸರ್ವಜ್ಞನೊಬ್ಬನೆ ಸರ್ವಕಾರಣ.
ಹೀಗೆಂಬುದು ಪರಮಾರ್ಥವಲ್ಲದೆ ಉಳಿದವೆಲ್ಲಾ ಜೀವಭಾವ ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Osi lōkādhīna, osi śivādhīnavuṇṭe lōkadoḷage?
Osi puruṣa prayatna, osi śivaprayatnavuṇṭe lōkadoḷage?
Osi lōkārtha, osi paramārthavuṇṭe lōkadoḷage?
Osi jīvaguṇa, osi paramanaguṇavaṇṭe lōkadoḷage?
Sthāvara jaṅgamātmakaṅgaḷa laya gamanaṅgaḷige
adhiṣṭhāna kartr̥ śivanendariyadavaṅge śivajñānavelliyadō?
Samastātmarige sarvaprēraka sarvacaitan'ya sarvavyāpaka
sarvamayanu sarvajñanobbane sarvakāraṇa.
Hīgembudu paramārthavallade uḷidavellā jīvabhāva kāṇā,
mahāliṅgaguru śivasid'dhēśvara prabhuvē.